School news

ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ರೈತರ ದಿನಾಚರಣೆ

ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ರೈತರ ದಿನಾಚರಣೆ

ಎಚ್ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ರೈತರ ದಿನಾಚರಣೆ

 ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತಎಚ್ ಎಮ್ ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿರೈತರ ದಿನಾಚರಣೆ ಬಹಳ ಸಂಭ್ರಮದಿಂದ ಜರುಗಿತು. ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ರೈತರ ಉಡುಪಿನಲ್ಲಿಕಂಗೊಳಿಸಿದರು. ರೈತ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕೃಷಿ ಉಪಕರಣಗಳ ಪ್ರದರ್ಶನ ಗಮನ ಸೆಳೆಯಿತು.ದಿನ ಮಾತ್ರಕ್ಕೆ ರೈತರಾದ ವಿದ್ಯಾರ್ಥಿಗಳು ಉತ್ತು, ನಾಟಿ ಮಾಡುವ ದೃಶ್ಯದ ಅಣುಕು ಪ್ರದರ್ಶನ ಆಕರ್ಷಕವಾಗಿತ್ತು.ನಂತರ ವಿದ್ಯಾರ್ಥಿಗಳು ರೈತ ಗೀತೆ ಯೊಂದಿಗೆ ಸಂಭ್ರಮಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಉಪ ಪ್ರಾಂಶುಪಾಲರಾದಶುಭಾ ಕೆ ಎನ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯಶಿಕ್ಷಕಿಕವಿತಾ ಭಟ್ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಸಹಯೋಗದೊಂದಿಗೆ ಕಾರ್ಯಕ್ರಮ ಮೂಡಿಬಂತು.