School news

ಎಚ್. ಎಮ್. ಎಮ್ ವಿ. ಕೆ. ಆರ್ ನಲ್ಲಿ ಸಂಭ್ರಮದ ಶಾಲಾರಂಭ

ಎಚ್. ಎಮ್. ಎಮ್ ವಿ. ಕೆ. ಆರ್ ನಲ್ಲಿ ಸಂಭ್ರಮದ ಶಾಲಾರಂಭ

ಎಚ್. ಎಮ್. ಎಮ್ ವಿ. ಕೆ. ಆರ್ ನಲ್ಲಿ ಸಂಭ್ರಮದ ಶಾಲಾರಂಭ

ಬಣ್ಣ, ತೋರಣಗಳಿಂದ ಅಲಂಕೃತವಾದ ಶಾಲೆ, ಶಾಲೆಯ ಸಿಬ್ಬಂದಿಗಳ ನಗು ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳನ್ನು ಸ್ವಾಗತಿಸಿದವು. ಕುಂದಾಪುರದ ಪ್ರತಿಷ್ಠಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ವರ್ಷವನ್ನು ಮಕ್ಕಳ ಕಲರವದೊಂದಿಗೆ ದಿನಾಂಕ ೧೬.೦೫.೨೦೨೨ ರಂದು ಆರಂಭಿಸಲಾಯಿತು. 

ಖುಷಿಯಿಂದ ಆಗಮಿಸಿದ ಮಕ್ಕಳಿಗೆ ಹಾಡು, ಪುಷ್ಪವೃಷ್ಟಿ ಸಂತಸವನ್ನು ತರಿಸಿತು. ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಸ್ವಾಗತಿಸಿ ಹೊಸವರ್ಷಕ್ಕೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಹಾಗೂ ಉಪಪ್ರಾಂಶುಪಾಲರಾದ ಶುಭ ಕೆ. ಎನ್, ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕರಾದ ಕವಿತಾ ಭಟ್ ಮತ್ತು ಚಂದ್ರಶೇಖರ್ ಶೆಟ್ಟಿ, ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಭಾವನ ಮತ್ತು ಚೈತ್ರ ಎಮ್. ಪಿ ಕಾರ್ಯಕ್ರಮ ನಿರೂಪಿಸಿದರು.