School news

ರಾಷ್ಟ್ರಮಟ್ಟದ ಕರಾಟೆಯಲ್ಲಿ ಎಚ್. ಎಮ್.ಎಮ್ ನ ವಿದ್ಯಾರ್ಥಿಗಳು

ರಾಷ್ಟ್ರಮಟ್ಟದ ಕರಾಟೆಯಲ್ಲಿ ಎಚ್. ಎಮ್.ಎಮ್ ನ ವಿದ್ಯಾರ್ಥಿಗಳು

ಕುಂದಾಪುರ (ಸೆ.7) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ವಿ.ಕೆ.ಆರ್ ಶಾಲೆಗಳ ಅನೇಕ ವಿದ್ಯಾರ್ಥಿಗಳು  ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾದ ವತಿಯಿಂದ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕರಾಟೆ ಓಪನ್ ಚಾಂಪಿಯನ್ ಲೀಗ್ ಬ್ಲಾಸ್ಟ್ - 2023 ರಲ್ಲಿ ಭಾಗವಹಿಸಿ, ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. 

ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರತೀಕ್ ಕುಮಿಟೆ ಮತ್ತು  ಕಟಾದಲ್ಲಿ ಪ್ರಥಮ,  ಆರ್ಯನ್ ಕೆ ಪೂಜಾರಿ  ಕುಮಿಟೆಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ದ್ವಿತೀಯ, ಅರ್ನೋನ್ ಕುಮಿಟೆಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ತೃತೀಯ, ಭುವನ್ ಕುಮಿಟೆ ಪ್ರಥಮ, ಕಟಾ ದ್ವಿತೀಯ,  ರಿಮಿತಾ, ಅಥರ್ವ  ಖಾರ್ವಿ ಮತ್ತು  ಛಾಯಾ ವಿ.ಆರ್ ಕುಮಿಟೆಯಲ್ಲಿ ದ್ವಿತೀಯ, ಶ್ರೇಯಸ್ ಮತ್ತು ಪ್ರದ್ಯುಮ್ನ ಕುಮಿಟೆಯಲ್ಲಿ ತೃತೀಯ  ಹಾಗೂ ದಿಶಾ ಕುಮಟೆ ಮತ್ತು ಕಾಟಾದಲ್ಲಿ ತೃತೀಯ ಸ್ಥಾನವನ್ನೂ ಪಡೆದಿರುತ್ತಾರೆ. 

ವಿಜೇತರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದರು. ಕರಾಟೆ ಶಿಕ್ಷಕರಾದ ಸಂದೀಪ್ ಕಿರಣ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.