School news

ಎಚ್.ಎಮ್.ಎಮ್ ವಿ.ಕೆ.ಆರ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ

ಎಚ್.ಎಮ್.ಎಮ್ ವಿ.ಕೆ.ಆರ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನ ಪ್ರಾರಂಭ, ಅದು ಕ್ರಮಿಸಿರುವ ವಿಚಾರ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದರ ಮಹತ್ವದ ಬಗ್ಗೆ ಶಾಲೆಯ ಬಸ್ ಚಾಲಕ ನಾಗರಾಜ್ ಮಾತನಾಡಿದರು. ಶಿಕ್ಷಕರಾದ ಶ್ರೀನಿವಾಸ್ ಬೈಂದೂರು, ಜಗದೀಶ್ ದಿನದ ವಿಶೇಷತೆಯನ್ನು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಕಚೇರಿ ಸಿಬ್ಬಂದಿ ಸಂತೋಷ್ ಮಹಿಳೆಯರ ಸಮರ್ಪಣಾ ಭಾವವನ್ನು ಹಾಗೂ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶಿಕ್ಷಕ ವಿನೋದ್ ವಂಡಾರ್‌ರವರು ರಚಿಸಿದ ಗೀತೆಗೆ ಎಲ್ಲಾ ಶಿಕ್ಷಕರು ಧ್ವನಿಯಾದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ಉಪಪ್ರಾಂಶುಪಾಲರಾದ ಶುಭಾ ಕೆ.ಎನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕ ಪ್ರಕಾಶ್ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಶಿಕ್ಷಕರಾದ ಚಂದ್ರಶೇಖರ್ ಶೆಟ್ಟಿ ಹಾಗೂ ರಮೇಶ್ ಹಾಂಡ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.