School news

ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ಅಂದದ ಬರವಣಿಗೆ ಕಾರ್ಯಾಗಾರ

ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ಅಂದದ ಬರವಣಿಗೆ ಕಾರ್ಯಾಗಾರ

ಚೆಂದದ ಬರವಣಿಗೆ ಉತ್ತಮ ಜ್ಞಾನಾರ್ಜನೆಯ ಮೆಟ್ಟಿಲು; ವಿದ್ಯಾರ್ಥಿಗಳು ಎಳವೆಯಲ್ಲಿ ಉತ್ತಮ ಬರವಣಿಗೆಯ ಶೈಲಿಯನ್ನು ರೂಢಿಸಿಕೊಳ್ಳಬೇಕು. ಇದಕ್ಕೆ ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸರಿಯಾದ ವಿಧಾನವನ್ನು ತಿಳಿಸಿಕೊಡಬೇಕು ಎಂದು  ಶ್ರೀ ವೈ. ಮಲ್ಲಿಕಾರ್ಜುನ ರಾವ್ ತಿಳಿಸಿದರು.

ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗಾಗಿ ಆಯೋಜಿಸಿದ ಜ್ಞಾನ ವಿಕಾಸ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ವಿದ್ಯಾರ್ಥಿಗಳಾದ ಕೌಶಿಕ್ ಎ. ಶೆಟ್ಟಿ ಮತ್ತು ಭಕ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.