School news

ಚೆಸ್ – ರಾಷ್ಟ್ರಮಟ್ಟಕ್ಕೆ ವಿ.ಕೆ.ಆರ್. ವಿದ್ಯಾರ್ಥಿನಿ ಶ್ರಾವ್ಯ

ಚೆಸ್ – ರಾಷ್ಟ್ರಮಟ್ಟಕ್ಕೆ ವಿ.ಕೆ.ಆರ್. ವಿದ್ಯಾರ್ಥಿನಿ ಶ್ರಾವ್ಯ
ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರಾವ್ಯ ಇವಳು ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಬೆಂಗಳೂರು ದಕ್ಷಿಣ ಜಿಲ್ಲೆ ಇಲ್ಲಿ ನಡೆದ 17ರ ವಯೋಮಾನದ ಬಾಲಕಿಯರ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜೇತಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಶ್ರೀ ಅರುಣ ಪೂಜಾರಿ ಮತ್ತು ಶ್ರೀಮತಿ ಸುಜಾತ ದಂಪತಿಯ ಪುತ್ರಿ.