ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ನಲ್ಲಿ ವಿದ್ಯಾರ್ಥಿ ಸಂಸತ್‌ಗೆ ಚುನಾವಣೆ
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಉತ್ತೇಜಿಸುವ ಮತ್ತು ಚುನಾವಣಾ ಪರಿಕಲ್ಪನೆಯನ್ನು ಅರ್ಥೈಸುವ ಸಲುವಾಗಿ ಸಂಸ್ಥೆಯು ಹಮ್ಮಿಕೊಂಡ ಒಂದು ವಿನೂತನ ಪ್ರಯತ್ನವೇ ವಿದ್ಯಾರ್ಥಿ ಸಂಸತ್‌ನ ಚುನಾವಣೆ.
ಇ.ವಿ.ಎಮ್ ಬಳಕೆ : ತಂತ್ರಜ್ಞಾನದ ಮೂಲಕ ಮತ ಚಲಾಯಿಸುವ ಭಾಗವಾಗಿ “ಟ್ಯಾಬ್”ನ ಮೂಲಕ ಮೊಬೈಲ್‌ನಿಂದ “ಇ.ವಿ.ಎಮ್” ಯಂತ್ರ ಬಳಕೆಮಾಡುವ ಮೂಲಕ ವಿದ್ಯಾರ್ಥಿಗಳು ಕಾಗದರಹಿತ ಮತದಾನ ನಡೆಸಿ, ಬೆರಳಿಗೆ ಕಪ್ಪು ಶಾಹಿ ಹಾಕಿಸಿಕೊಂಡ ಅವರ ಉತ್ಸಾಹ, ಚುನಾವಣಾ ಪ್ರಜ್ಞೆಯ ಅನುಭವ ಗಮನ ಸೆಳೆಯಿತು.
ಮತ ಎಣಿಕೆ : ವ್ಯವಸ್ಥಿತವಾಗಿ ಪ್ರಾರಂಭವಾದ ಮತ ಎಣಿಕೆಯು ಅಭ್ಯರ್ಥಿಗಳ ಸಮ್ಮುಖದಲ್ಲಿ ಎಣಿಸಲ್ಪಟ್ಟು ಮೂರು ಸುತ್ತುಗಳಲ್ಲಿ ಮುಕ್ತಾಯಗೊಂಡಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಶ್ರೀಶ್ ಶೆಟ್ಟಿ, ಉಪನಾಯಕನಾಗಿ ಪ್ರತೀಕ್ ಎನ್ ಶೆಟ್ಟಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ನಕ್ಷಾ ಶೆಟ್ಟಿ, ಉಪನಾಯಕಿಯಾಗಿ ಪ್ರಾಪ್ತಿ ಮಡಪ್ಪಾಡಿ ಚುನಾಯಿತರಾದರು.
ಪ್ರಮಾಣ ವಚನ: ಶಾಲಾ ಸಂಸತ್‌ನ ರಚನೆಯ ಭಾಗವಾಗಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆಂದು ಆಯ್ಕೆಯಾದ ಮಂತ್ರಿಮಂಡಲದ ಎಲ್ಲಾ ಸದಸ್ಯರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಚಿಂತನಾ ರಾಜೇಶ್, ಉಪಪ್ರಾಂಶುಪಾಲರಾದ ಶುಭಾ ಕೆ.ಎನ್‌ರ ಮಾರ್ಗದರ್ಶನದಲ್ಲಿ ನಡೆದ ಈ ಪ್ರಕ್ರಿಯೆ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯಶಿಕ್ಷಕಿ ಕವಿತಾ ಭಟ್, ಪ್ರೌಢಶಾಲಾ ವಿಭಾಗದ ಸಂಯೋಜಕ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಪ್ರಾಥಮಿಕ ವಿಭಾಗದ ಸಂಯೋಜಕ ಶಿಕ್ಷಕರಾದ ಕವಿತಾ ಪಿ ಮತ್ತು ವೀರೇಂದ್ರ ನಾಯಕ್‌ರ ನೇತೃತ್ವದಲ್ಲಿ ಸಮಾಜ ಶಿಕ್ಷಕರು, ಇನ್ನಿತರ ಚುನಾವಣಾ ಸಮಿತಿ ಶಿಕ್ಷಕರ ಸಹಯೋಗದೊಂದಿಗೆ ಚುನಾವಣಾ ಕಾರ್ಯ ಸಂಪನ್ನಗೊಂಡಿತು.