ಹೆಚ್ ಎಮ್ ಎಮ್, ವಿ ಕೆ ಆರ್ ನ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನಗಳು - December 8, 2023

ಕುಂದಾಪುರ (ಡಿ.8) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್  ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿ ಕೆ ಬುಡೋಕಾನ್ ಸೆಲ್ಫ್ ಡಿಫೆನ್ಸ್ ಆಂಡ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮಂದರ್ತಿಯಲ್ಲಿ ಆಯೋಜಿಸಲ್ಪಟ್ಟ ನ್ಯಾಶನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ಮಂದರ್ತಿ ಟ್ರೋಫಿ 2023ರಲ್ಲಿ ಸ್ಪರ್ಧಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಆರ್ಯನ್ ಕೆ ಪೂಜಾರಿ,  ಪ್ರತೀಕ್,  ರಿಮಿತಾ,  ಅಥರ್ವ ಖಾರ್ವಿ ಕುಮಿಟೆ ಮತ್ತು ಕಟಾದಲ್ಲಿ ಪ್ರಥಮ, ಆರಾಧ್ಯ ಕುಮಿಟೆಯಲ್ಲಿ ಪ್ರಥಮ ಸ್ಥಾನವನ್ನು, ಅರ್ನೋನ್ ಡಿ ಅಲ್ಮೆಡಾ ಕುಮಿಟೆ ಪ್ರಥಮ ಕಟಾ ದ್ವಿತೀಯ, ಧನ್ವಿತ್ ಕುಮಿಟೆ ಪ್ರಥಮ ಕಟಾದಲ್ಲಿ ತೃತೀಯ, ಸದ್ವಿತ್ ಶೆಟ್ಟಿ ಕುಮಿಟೆ ದ್ವಿತೀಯ, ಆಶಿಶ್ ವಿ ಕುಮಿಟೆ ಮತ್ತು ಕಟಾದಲ್ಲಿ ತೃತೀಯ, ಶ್ರೇಯಸ್ ವಿ  ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved