ಎಲ್.ಕೆ.ಜಿ ಯು.ಕೆ.ಜಿ ಪ್ರಾರಂಭೋತ್ಸವ - November 8, 2021

ಎಲ್.ಕೆ.ಜಿ ಯು.ಕೆ.ಜಿ ಪ್ರಾರಂಭೋತ್ಸವ

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವಪ್ರಾಥಮಿಕ ವಿಭಾಗದ ಎಲ್.ಕೆ.ಜಿ ಯು.ಕೆ.ಜಿ ತರಗತಿ ಆರಂಭೋತ್ಸವವು ಪ್ರಾಂಶುಪಾಲರಾದ ಚಿಂತನಾ ರಾಜೇಶ್‌ರವರ ಮಾರ್ಗದರ್ಶನದೊಂದಿಗೆ ಸಂಭ್ರಮದಿಂದ ಜರುಗಿತು. ಹೂಮಳೆ ಮತ್ತು ಆರತಿ ಬೆಳಗುವುದರ ಮೂಲಕ ಪುಟಾಣಿಗಳನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಸ್ವಾಗತ ಗೀತೆ ಮತ್ತು ನೃತ್ಯಗಳ ಮೂಲಕ ಮಕ್ಕಳ ಗಮನಸೆಳೆಯಲಾಯಿತು. ಜೋಕರ್ ವೇಷವನ್ನು ತೊಟ್ಟು ಶಿಕ್ಷಕಿ ವಿದ್ಯಾ ಪುಟಾಣಿಗಳ ಮನಗೆದ್ದರು.

ಉಪಪ್ರಾಂಶುಪಾಲರಾದ ಶುಭಾ ಕೆ.ಎನ್, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲತಾ ಜಿ.ಭಟ್, ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved