ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ಕಾರ್ಯಾಗಾರ
ಕುಂದಾಪುರದಪ್ರತಿಷ್ಠಿತ ವಿದ್ಯಾಸಂಸ್ಥೆ ಕುಂದಾಪುರ ಎಜುಕೇಷನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿಕೆ ಆರ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ " ಡ್ರಾಮಾ ಎಂಡ್ ಆರ್ಟ್ ಇನ್ ಕ್ಲಾಸ್ ರೂಮ್" ಕಾರ್ಯಾಗಾರಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಸರಕಾರಿ ಪದವಿ ಪೂರ್ವ ಕಾಲೇಜ್ ಬೆಳ್ತಂಗಡಿಯ ಇಂಗ್ಲೀಷ್ಉಪನ್ಯಾಸಕ, ರಾಜ್ಯ ಮಟ್ಟದ ಜ್ಞಾನ ಸಂಜೀವಿನಿ ಪುರಸ್ಕೃತ ಪ್ರೋ।ಶೀನ ನಾಡೋಲಿ ಆಗಮಿಸಿ, ಪರಿಣಾಮಕಾರಿ ಮತ್ತು ಆಕರ್ಷಕ ತರಗತಿಯಲ್ಲಿನಾಟಕ ಮತ್ತು ಥಿಯೇಟರ್ ಕಲೆಯ ಮಹತ್ವದ ಬಗ್ಗೆ ಶಿಕ್ಷಕರಿಗೆ ಅರುಹಿದರು. ಇವರೊಂದಿಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಮರವಂತೆಯ ಮುಖ್ಯೋಪಾಧ್ಯಾಯ, ಚೋಮನದುಡಿಯ ಚೋಮನಾಗಿ ಪ್ರಖ್ಯಾತರಾದ ಸತ್ಯನಾ ಕೋಡೇರಿಸಹ ಆಗಮಿಸಿದ್ದರು.
ಸಂಸ್ಥೆಯ ಉಪಪ್ರಾಂಶುಪಾಲೆಶುಭಾ ಕೆ ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಮುಖ್ಯ ಸಹ ಶಿಕ್ಷಕಿಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ ಭಟ್, ಪ್ರೌಢಶಾಲಾ ಸಂಯೋಜಕ ಶಿಕ್ಷಕಚಂದ್ರಶೇಖರ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ವಿನೋದ್ ವಂಡಾರ್ ಕಾರ್ಯಕ್ರಮನಿರೂಪಿಸಿ, ವಂದಿಸಿದರು.