ಗಾಂಧೀ ಜಯಂತಿಯ ಆಚರಣೆಯಲ್ಲಿ ಎಚ್‌ಎಮ್‌ಎಮ್ ಮತ್ತು ವಿಕೆಆರ್ ಶಾಲೆಗಳು
ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್‌ಎಮ್‌ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಮತ್ತು ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಆಗಮಿಸಿ, ಮಹಾತ್ಮರ ಭಾವಚಿತ್ರಕ್ಕೆ ಪುಷ್ಪನಮನ ಗೈದರು. ನಂತರ ಎಲ್ಲಾ ಶಿಕ್ಷಕರಿಂದ ಸರ್ವಧರ್ಮ ಪ್ರಾರ್ಥನೆ ನೆರವೇರಿತು.
ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಚಿಂತನಾ ರಾಜೇಶ್, ಉಪಪ್ರಾಂಶುಪಾಲೆ ಶುಭಾ ಕೆ. ಎನ್., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್, ಮುಖ್ಯ ಸಹಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ. ಭಟ್, ಪ್ರೌಢ ಶಾಲಾ ಸಂಯೋಜಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಪ್ರಾಥಮಿಕ ವಿಭಾಗದ ಸಂಯೋಜಕ ಶಿಕ್ಷಕರಾದ ಕವಿತಾ ಪಿ. ಮತ್ತು ವೀರೇಂದ್ರ ನಾಯಕ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಮಹಾತ್ಮರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕಿ ದಿವ್ಯಾ ಪ್ರೀತಿ ನಜ಼ರತ್, ಗಾಂಧೀ ಕೇವಲ ವ್ಯಕ್ತಿಯಲ್ಲ; ನಮ್ಮೆಲ್ಲರ ಶಕ್ತಿ ಎನ್ನುವ ಸಂದೇಶವನ್ನು ಬಿತ್ತರಿಸಿದರು.