ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ದಿನದ ಸಂಭ್ರಮಾಚರಣೆ - November 15, 2021

ಪೂರ್ವ ಪ್ರಾಥಮಿಕ ಶಾಲಾ  ಮಕ್ಕಳ ದಿನದ ಸಂಭ್ರಮಾಚರಣೆ

ಕುಂದಾಪುರ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳ ದಿನಾಚರಣೆಯನ್ನು ಸಂಸ್ಥೆಯ ಪ್ರಾಂಶುಪಾಲರಾಗಿರುವ ಚಿಂತನಾ ರಾಜೇಶ್‌ರವರ ಮಾರ್ಗದರ್ಶನದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ.ಜಿ. ಭಟ್‌ರವರು ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ವಿ.ಕೆ.ಆರ್ ಹೈಸ್ಕೂಲ್‌ನ ಸಂಯೋಜಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಇವರು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದರು. ಶಿಕ್ಷಕಿ ವಿದ್ಯಾ ಏಕಪಾತ್ರಾಭಿನಯದ ಮೂಲಕ ಮಕ್ಕಳನ್ನು ಮನರಂಜಿಸಿದರು. ಉಪಪ್ರಾಂಶುಪಾಲೆ ಶುಭಾ ಕೆ.ಎನ್ ಹಾಗೂ ಬೋಧಕ-ಬೋಧಕೇತರ ವೃಂದದವರು ಸಹಕರಿಸಿದರು. ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved