ಎಚ್.ಎಮ್.ಎಮ್. ವಿ.ಕೆ.ಆರ್ : ಪದಗ್ರಹಣ
ಕುಂದಾಪುರ : (ಶನಿವಾರ ೧೧.೦೬.೨೦೨೨)
‘ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಭವ್ಯ ಭಾರತದ ನಿರ್ಮಾಣ ಸಾಧ್ಯ. ವಿದ್ಯಾರ್ಥಿ ಸಂಸತ್ತಿನ ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರು ಜೊತೆಜೊತೆಯಾಗಿ ಕೈಜೋಡಿಸಿದಲ್ಲಿ ಶಾಲಾ ಸಂಸತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಲ್ಲದು’. ಎಂದು ಕುಂದಾಪುರದ ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ ಮೆಂಡನ್ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆಯ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಈ ಮಾತುಗಳನ್ನಾಡಿದರು.
ಪ್ರೌಢ ಶಾಲೆಯ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಸನ್ಮಿತಾ, ಉಪನಾಯಕನಾಗಿ ಮಹಮ್ಮದ್ ಹುಸೈಫ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಸಾತ್ವಿಕ್, ಉಪನಾಯಕಿಯಾಗಿ ಶ್ರೀದೇವಿಯವರೊಂದಿಗೆ ವಿದ್ಯಾರ್ಥಿ ಮಂತ್ರಿಮAಡಲದ ಎಲ್ಲಾ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರೌಢಶಾಲಾ ಶಿಕ್ಷಕರಾದ ಕ್ಯಾಪ್ಟನ್ ಸುರೇಂದ್ರ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಮಂತ್ರಿಮAಡಲದ ಸದಸ್ಯರಿಗೆ ಶುಭ ಹಾರೈಸಿದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶುಭಾ ಕೆ ಎನ್ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಆಚಾರ್ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಸಮಿತಿಯ ಶಿಕ್ಷಕ ಸದಸ್ಯರ ಸಹಯೋಗದೊಂದಿಗೆ ಪದಗ್ರಹಣ ಸಮಾರಂಭ ಸಂಪನ್ನಗೊAಡಿತು. ಪ್ರೌಢ ಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ, ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಜಿ. ಭಟ್ ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಿಯಾ ಸಾಜನ್ ಕಾರ್ಯಕ್ರಮ ನಿರೂಪಿಸಿದರು.