ಎಚ್ ಎಮ್ ಎಮ್ ನಲ್ಲಿ ಹದಿಹರೆಯದ ಶಿಕ್ಷಣ
ಕುಂದಾಪುರ : ಬೈಂದೂರು ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆಯ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರರ‍್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ೧೭/೦೬/೨೦೨೨ ಶುಕ್ರವಾರದಂದು ಐದು, ಆರು ಮತ್ತು ಏಳನೇ ತರಗತಿಯ ವಿದ್ಯರ‍್ಥಿನಿಯರಿಗಾಗಿ ಹದಿಹರೆಯದ ಶಿಕ್ಷಣ ಮಾಹಿತಿ ಕರ‍್ಯಾಗಾರ ಜರುಗಿತು.
ಕರ‍್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಪ್ರಸಿದ್ಧ ಆಯುಷ್ ಧಾಮ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಆಗಿರುವ ಡಾ. ಸೋನಿ ಡಿ ಕೋಸ್ಟ ಆಗಮಿಸಿದ್ದರು. ಡಾಕ್ಟರ್ ಮಾತನಾಡಿ ಹದಿಹರೆಯದಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಮಾನಸಿಕ ಒತ್ತಡ, ಹದಿಹರೆಯದ ಸಮಸ್ಯೆಗಳು ಮತ್ತು ಅದನ್ನು ಪರಿಹರಿಸಿಕೊಳ್ಳಬಹುದಾದ ವಿಧಾನಗಳ ಬಗ್ಗೆ ವಿದ್ಯರ‍್ಥಿನಿಯರಿಗೆ ಬಹಳ ಅತ್ಯುತ್ತಮವಾದ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭ ಕೆ ಎನ್ ಮತ್ತು ಎಲ್ಲಾ ವಿದ್ಯರ‍್ಥಿನಿಯರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ ಮತ್ತು ಸಹಾಯಕ ಮುಖ್ಯಶಿಕ್ಷಕಿ ಕವಿತಾ ಭಟ್ ಮತ್ತು ಕರ‍್ಯಕ್ರಮ ಆಯೋಜಿಸಿದ್ದರು. ಶಿಕ್ಷಕಿ ಪ್ರಿಯಾಂಕ ಕರ‍್ಯಕ್ರಮವನ್ನು ನಿರೂಪಿಸಿದರು.