ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ದೇಹ ಮತ್ತು ಮನಸ್ಸುಗಳ ಸಮ್ಮಿಲನವೇ ಯೋಗದ ಮೂಲ ಸಾರ ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ಸಾರುವ ಸಲುವಾಗಿ ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ ೨೧ರಂದು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ತರಬೇತುದಾರರಾದ ಶಿಕ್ಷಕಿ ಭಾರತಿ ನಾಯಕ್ ಹಾಗು ದೈಹಿಕ ಶಿಕ್ಷಕರಾದ ವೀರೇಂದ್ರ ನಾಯಕ್ ರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳನ್ನು ಪರಿಚಯಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭ ಕೆ ಎನ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಪ್ರೌಢಶಾಲಾ ಸಹಾಯಕ ಮುಖ್ಯಶಿಕ್ಷಕ ಚಂದ್ರಶೇಖರ ಶೆಟ್ಟಿ, ಪ್ರಾಥಮಿಕ ಶಾಲಾ ಸಹಾಯಕ ಮುಖ್ಯಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲತಾ ಜಿ ಭಟ್ ಮತ್ತು ಇನ್ನಿತರ ಶಿಕ್ಷಕರು ಮತ್ತು ಎಲ್ಲಾವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ರವಿಚಂದ್ರ ನಿರೂಪಿಸಿ, ಶಿಕ್ಷಕಿ ಶಿಲ್ಪ ಎಸ್ ವಂದಿಸಿದರು.