ಅನುಪಮ – ೨೦೨೨
ಕುಂದಾಪುರ ಎಜುಕೇಷನ್ ಸೊಸೈಟಿ ಪ್ರವರ್ತಿತ ಕುಂದಾಪುರದ ಪ್ರತಿಷ್ಠಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ವಿ ಕೆ ಆರ್ ಆಚಾರ್ಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ‘ಅನುಪಮ – ೨೦೨೨’ ಕಾರ್ಯಕ್ರಮ ದಿನಾಂಕ ೨೯-೦೪-೨೦೨೨ರಂದು ಜರಗಿತು.
‘ರಜೆಯಲ್ಲೊಂದಿನ ಶಾಲೆಗೆ ಬನ್ನಿ’ ಎನ್ನುವ ಆಶಯದೊಂದಿಗೆ ಶಾಲೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಸತೀಶ್ ಜಾದೂಗಾರ್ ಹೆಮ್ಮಾಡಿಯವರಿಂದ ‘ಜಾದೂ ಜಾತ್ರೆ’ ಯಕ್ಷಗಾನ ಗುರು ಕಡ್ಲೆ ಗಣಪತಿ ಹೆಗ್ಡೆಯವರಿಂದ ತರಬೇತಿಗೊಂಡ ಶಾಲೆಯ ವಿದ್ಯಾರ್ಥಿಗಳ ‘ಯಕ್ಷಹೆಜ್ಜೆ’ ಹಾಗೂ ಗೊಂಬೆ ಗಾರುಡಿಗ ಭಾಸ್ಕರ ಕೊಗ್ಗ ಕಾಮತ್, ಉಪ್ಪಿನಕುದ್ರು ಇವರಿಂದ ಯಕ್ಷಗಾನ ‘ಗೊಂಬೆಯಾಟ ಪ್ರಾತ್ಯಕ್ಷಿಕೆ’ ನೇರವೇರಿತು.
ಸಂಸ್ಥೆಯ ಸಂಚಾಲಕರೂ, ಅಧ್ಯಕ್ಷರೂ ಆದಂತಹ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊAಡ ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಶಾಲೆಯ ಉಪಪ್ರಾಂಶುಪಾಲರು ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಲತಾ ಜಿ. ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀನಿವಾಸ ಬೈಂದೂರು, ಗಾಯತ್ರಿ, ಸ್ವಪ್ನಾ ಸತೀಶ್, ಆಶಾಲತಾ, ವಿದ್ಯಾ ನಡೆಸಿಕೊಟ್ಟರು. ಶಾಲೆಯ ಸಂಯೋಜಕರಾದ ಚಂದ್ರಶೇಖರ್ ಶೆಟ್ಟಿ ಹಾಗೂ ವೀರೇಂದ್ರ ನಾಯಕ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಶಿಕ್ಷಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.