ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಿಂದಾಚೆಗಿನ ಅನುಭವ - July 17, 2023

ಕುಂದಾಪುರ (17.07.2023) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ  ಪೂರ್ವ ಪ್ರಾಥಮಿಕ,  ಪ್ರಾಥಮಿಕ  ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿಎಲ್‌ ಕೆ ಜಿ, ಯು ಕೆ ಜಿ ,  7 ಮತ್ತು 10ನೇ ತರಗತಿಯವಿದ್ಯಾರ್ಥಿಗಳು ಪಠ್ಯಪುಸ್ತಕದಿಂದಾಚೆಗಿನ ಅನುಭವಕ್ಕೆ ಸಾಕ್ಷಿಯಾದರು.

        ಸಂಸ್ಥೆಯ 7 ಮತ್ತು 10ನೇ ತರಗತಿಯ  ವಿದ್ಯಾರ್ಥಿಗಳು, ಕುಂದಾಪುರದ ಕೋಣಿಯಲ್ಲಿರುವ ಗದ್ದೆಗೆಹೋಗಿ, ಬಹಳ ಉತ್ಸಾಹದಿಂದ, ಭತ್ತದ ಸಸಿಗಳನ್ನು ನೆಡುವುದರ ಮೂಲಕ ಗದ್ದೆ ನಾಟಿಯ ಸ್ವ ಅನುಭವವನ್ನು ಆನಂದಿಸಿದರು.ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳು ಗದ್ದೆ ಅಂಚಿನಲ್ಲಿ ನಿಂತು ವಿಕ್ಷೀಸಿದರು. ಹೀಗೆ ಭಾರತೀಯರಪ್ರಧಾನ ಆಹಾರ ಧಾನ್ಯವಾದ ಭತ್ತ ಬೆಳೆಯುವ ವಿಧಾನ, ಆ ದಿಸೆಯಲ್ಲಿ ರೈತನ ಶ್ರಮ ಮತ್ತು ಅವರ ಮಹತ್ವವನ್ನುಮನಗಂಡರು.

              ಸಂಸ್ಥೆಯ ಪ್ರಾಂಶುಪಾಲೆ  ಡಾ. ಚಿಂತನಾ ರಾಜೇಶ್ ರ ಮಾರ್ಗದರ್ಶನ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ ಇವರ ನೇತೃತ್ವದಲ್ಲಿ  ಶಿಕ್ಷಕರಾದ ದಿವ್ಯ ಎನ್, ಕವಿತಾ ಪಿ, ಭಾಗ್ಯ,  ಪ್ರೀತೇಶ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಕೆ ಪರಮೇಶ್ವರ ಉಡುಪ, ಅಶ್ವಿನಿ  ರಂಜನಿ, ಆರತಿ, ವಿದ್ಯಾ, ಭಾವನಾ  ಮತ್ತು ಸುಮಂಗಲ ರವರ ಸಹಯೋಗದೊಂದಿಗೆ ಭತ್ತದ ಗದ್ದೆ ನಾಟಿಕಾರ್ಯ ಜರುಗಿತು. ಈ ವಿಶಿಷ್ಟವಾದ ಚಟುವಟಿಕೆಯನ್ನು ಸಂಸ್ಥೆಯ ಉಪ ಪ್ರಾಂಶುಪಾಲೆ ಮತ್ತು ಪ್ರೌಢಶಾಲಾಮುಖ್ಯ ಶಿಕ್ಷಕಿ ಶುಭ ಕೆ ಎನ್ , ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ಹಾಗೂ  ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಜಿ ಭಟ್‌ಆಯೋಜಿಸಿದ್ದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved