ಕುಂದಾಪುರ [22.09.2023]: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಬಿ ಎಂ ಸುಕುಮಾರ ಶೆಟ್ಟಿ ಅವರ ನೇತೃತ್ವದ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತಂ ಮತ್ತು ವಿಕೆಆರ್ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಯೋಗದಲ್ಲಿ ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಕೋಟಿ ಎಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24ರಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿರುತ್ತಾರೆ.
ಕಿರಿಯ ಪ್ರಾಥಮಿಕ ವೈಯಕ್ತಿಕ ವಿಭಾಗ ಭಕ್ತಿಗೀತೆ ಮತ್ತು ಲಘು ಸಂಗೀತದಲ್ಲಿ ಗೋಪಿಕಾ ತಂತ್ರಿ, ಆಶುಭಾಷಣ ಸಾತ್ವಿಕ್, ಛದ್ಮವೇಶ ಶ್ರೇಯಸ್, ಚಿತ್ರಕಲೆ ಆತ್ಮಿಕ ಪ್ರಥಮ ಸ್ಥಾನವನ್ನು ಸಂಸ್ಕೃತ ಧಾರ್ಮಿಕ ಪಠಣ ಚಿನ್ಮಯ್ ಮೊಗವೀರ ತೃತೀಯ, ಅರೇಬಿಕ್ ಧಾರ್ಮಿಕ ಪಠಣ ಮೂಹಾಝ್ ದ್ವಿತೀಯ ಸ್ಥಾನ, ಹಾಗೆಯೇ ಹಿರಿಯ ಪ್ರಾಥಮಿಕ ವೈಯಕ್ತಿಕ ವಿಭಾಗದಲ್ಲಿ ಭಕ್ತಿಗೀತೆ ಸಂಹಿತಾ ತಂತ್ರಿ, ಚಿತ್ರಕಲೆ ಅವನಿ ಎ ಶೆಟ್ಟಿಗಾರ್, ಮಿಮಿಕ್ರಿ ತ್ರಿಶೂಲ್, ಆಶುಭಾಷಣ ಮನೀಶ್ ಪ್ರಥಮ ಸ್ಥಾನವನ್ನು, ಕವನ ವಾಚನ ಪ್ರತೀಕ್ಷಾ ಪ್ರಕಾಶ್, ಕಥೆ ಹೇಳುವುದು ತ್ರಿಶೂಲ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ಶ್ರಾವ್ಯ, ಕ್ಲೇ ಮಾಡಲಿಂಗ್ ಆದರ್ಶ, ಹಿಂದಿ ಕಂಠಪಾಠ ಶ್ರೀಲತಾ, ಇಂಗ್ಲಿಷ್ ಕಂಠಪಾಠ ಶ್ರೀದೇವಿ, ಲಘು ಸಂಗೀತ ಸಂಹಿತಾ ತಂತ್ರಿ ದ್ವಿತೀಯ ಸ್ಥಾನವನ್ನು, ಪ್ರೌಢಶಾಲಾ ವೈಯಕ್ತಿಕ ವಿಭಾಗ ಛದ್ಮವೇಶ ಅಶ್ವಿತಾ ತೃತೀಯ, ಹಿಂದಿ ಭಾಷಣ ತೃಪ್ತಿ, ಚಿತ್ರಕಲೆ ಆಶಿತ್, ಇಂಗ್ಲಿಷ್ ಭಾಷಣ ಸ್ಪಂದನಾ, ಭಾವಗೀತೆ ಕೌಸ್ತುಬ್ ಉಡುಪ, ಕವನ ವಾಚನ ಅನನ್ಯ ದ್ವಿತೀಯ ಸ್ಥಾನವನ್ನು, ಭರತನಾಟ್ಯ ಗಾರ್ಗಿ ದೇವಿ, ಗಝಲ್ ಸುಹಾ ಶೇಖ್ ರಂಗೋಲಿ ಬ್ರಾಹ್ಮೀ ಉಡುಪ, ಚರ್ಚಾ ಸ್ಪರ್ಧೆ ಪ್ರಥಮ್ ಅಡಿಗ, ಅರೇಬಿಕ್ ಧಾರ್ಮಿಕ ಪಠಣ ಸನಾ ಪ್ರಥಮ ಸ್ಥಾನವನ್ನು ಮತ್ತು ಸಾಮೂಹಿಕ ವಿಭಾಗ ರಸಪ್ರಶ್ನೆ ಗಣೇಶ್ ಮತ್ತು ಶ್ರೀಧನ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಮತ್ತು ಸಹಾಯಕ ಮುಖ್ಯ ಶಿಕ್ಷಕರು ಅಭಿನಂದಿಸಿದರು.