ಗೀತ ಗಾಯನದಲ್ಲಿ ರಾಜ್ಯಮಟ್ಟಕ್ಕೆ ಎಚ್.ಎಮ್.ಎಮ್ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳು. - September 2, 2023

ಕುಂದಾಪುರ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಶನ್ ನ ಆಶ್ರಯದಲ್ಲಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಉಡುಪಿಯಲ್ಲಿ ಆಯೋಜಿಸಲ್ಪಟ್ಟ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳು ಭಾಗವಹಿಸಿ, ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ಪ್ರಾಥಮಿಕ ವಿಭಾಗದ ಪ್ರಿಯದರ್ಶಿನಿ ಬುಲ್ ಬುಲ್ ಸ್ಕಾಚ್ ತಂಡದ ವಿದ್ಯಾರ್ಥಿಗಳಾದ ಸಂಹಿತಾ, ಗೋಪಿಕಾ, ರಿನೊಲಾ, ಪ್ರಕೃತಿ ಮತ್ತು ಸಿಂಚನಾ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ  ಬುಲ್ ಬುಲ್ ಶಿಕ್ಷಕಿ ಶೈಲಾ ಶಾಲೆಟ್, ಗೈಡ್ಸ್ ಶಿಕ್ಷಕಿ ರೇಖಾ ಕೆ.ಯು ಮತ್ತು ಸಂಗೀತ ಶಿಕ್ಷಕ ಪ್ರಕಾಶ್ ರವರ ತರಬೇತಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved