ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತ ಎಚ್.ಎಮ್.ಎಮ್ ನ ವಿದ್ಯಾರ್ಥಿಗಳು - August 18, 2023

ಕುಂದಾಪುರ : ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್.ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 16ರಂದು ಕುಂದಾಪುರ ವೃತ್ತ ಮಟ್ಟದ ವಾಲಿಬಾಲ್ ಮತ್ತು ಖೋ ಖೋ ಪಂದ್ಯಾಟ ನಡೆಯಿತು.       15 ಶಾಲೆಗಳು ಭಾಗವಹಿಸಿದ ಈ ವಾಲಿಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳಾದ ಕೃತಿಕ್ ಕೆ, ಸಾತ್ವಿಕ್ ಕುಂದರ್, ಕಿಶನ್ ಎಮ್ ಪೂಜಾರಿ, ಪ್ರಣಿತ್ ಶೆಟ್ಟಿ, ಅದ್ವಿತ್, ಹರ್ಷ ಕಾಂಚನ್, ನಿಖಿಲ್, ಶ್ರೇಯಸ್ ಎಲ್, ರೋಹನ್, ಪ್ರಣವ್ ಎಸ್, ಭುವನ್ ಪೂಜಾರಿ ಮತ್ತು ಹರ್ಷ ಪೂಜಾರಿ ದ್ವಿತೀಯ ಸ್ಥಾನವನ್ನು ತಂದಿರುತ್ತಾರೆ. ವಿಜೇತರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved