ಕುಂದಾಪುರ ವೃತ್ತ ಮಟ್ಟದ ವಾಲಿಬಾಲ್ ಮತ್ತು ಖೋ ಖೋ ಪಂದ್ಯಾಟ - August 16, 2023

ಕುಂದಾಪುರ (ಆಗಸ್ಟ್ 16):  ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ವಿ. ಕೆ. ಆರ್ ಆಚಾರ್ಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ವ್ಯತ್ತ ಮಟ್ಟದ ವಾಲಿಬಾಲ್ ಮತ್ತು ಖೋ ಖೋ ಪಂದ್ಯಾಟ ನಡೆಯಿತು. 


                ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಗಳ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಶುಭ ಹಾರೈಸಿದರು. ಸಭೆಯಲ್ಲಿ ಎಚ್. ಎಮ್. ಎಮ್ ಶಾಲೆಯ ಮುಖ್ಯ ಶಿಕ್ಷಕರಾದ  ಜಗದೀಶ್ ಆಚಾರ್,  ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಂದ್ರ ನಾಯಕ್ ಮತ್ತು ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕಿನ 15 ಶಾಲೆಗಳು ಭಾಗವಹಿಸಿದ್ದು, ಶಿಕ್ಷಕಿ ಸ್ವಪ್ನ ಸತೀಶ್ ಕಾರ್ಯಕ್ರಮ ನಿರೂಪಿಸಿ,  ಶಿಕ್ಷಕರಾದ ರವಿಚಂದ್ರ ವಂದಿಸಿದರು.

45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved