ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗಾಗಿ ಒಂದು ದಿನದ ಜ್ಞಾನ ವಿಕಾಸ ಕಾರ್ಯಾಗಾರವು ಸಂಪನ್ನಗೊಂಡಿತು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಸೀತಾರಾಮ ನಕ್ಕತ್ತಾಯ ಇವರು ಕಾರ್ಯಾಗಾರವನ್ನು ಅರಿವೆ ಜ್ಯೋತಿ ಎನ್ನುವಂತೆ ವಿದ್ಯುಕ್ತವಾಗಿ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜಯಕ್ಕೆ ಐದು ಮೆಟ್ಟಿಲು ಖ್ಯಾತಿಯ ಹಿರಿಯ ಕಾದಂಬರಿಕಾರ ಡಾ. ಯಂಡಮೂರಿ ವೀರೇಂದ್ರನಾಥ್, ಅಂದದ ಕೈಬರಹದ ತರಬೇತುದಾರರೂ, ವಾಗ್ಮಿಯೂ ಆದ ಶ್ರೀ ವೈ. ಮಲ್ಲಿಕಾರ್ಜುನ ರಾವ್ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಮೊದಲ ಅವಧಿಯಲ್ಲಿ ಡಾ. ಯಂಡಮೂರಿ ವೀರೇಂದ್ರನಾಥ್ರವರು ಮಾತನಾಡಿ ನಮ್ಮ ಯಶಸ್ಸಿಗೆ ನಾವೇ ನಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯ ಸಾಧನೆಯ ಮೂಲಕ ಯಶಸ್ಸಿನ ಮೆಟ್ಟಿಲೇರಬೇಕು. ಇದಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತೀ ಮುಖ್ಯ ಎನ್ನುವದನ್ನು ತಿಳಿಸುತ್ತಾ ನಮ್ಮ ಸಾಧನೆಯ ಬದುಕಿನ ಪುಟಗಳನ್ನು ತೆರೆದಿಟ್ಟರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಡಾ. ಯಂಡಮೂರಿಯವರ ಸ್ಫೂತಿಭರಿತ ಮಾತುಗಳಿಂದ ಪ್ರೇರೇಪಿತರಾದ ವಿದ್ಯಾರ್ಥಿಗಳು ಗಣ್ಯರನ್ನು ಸನ್ಮಾನಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ಪಂದನಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.