ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲನ್ನು ಅತೀ ಹೆಚ್ಚು ಬಳಸುತ್ತಿದ್ದು, ಈ ದುಶ್ಟಟವನ್ನು ಬಿಡಿಸಬೇಕಾದರೆ ಪೋಷಕರು ಅವರಿಗೊಂದು ರೂಬಿಕ್ಸ್ ಕ್ಯೂಬ್ ತಂದು ಕೊಡಿ; ಅಲ್ಲದೆ ಎಷ್ಟೇ ಕೆಲಸದ ಒತ್ತಡ ಪೋಷಕರಿಗಿದ್ದರೂ ಕನಿಷ್ಟ ಅರ್ಧ ಗಂಟೆಯಾದರೂ ಪ್ರತಿನಿತ್ಯ ಮಕ್ಕಳೊಂದಿಗೆ ಕಳೆಯಿರಿ ಎಂದು ರೂಬಿಕ್ಸ್ ಕ್ಯೂಬ್ ಮಾಂತ್ರಿಕ, ವಿಶ್ವ ದಾಖಲೆಯ ಯುವ ಪ್ರತಿಭೆ ಗ್ರ್ಯಾಂಡ್ ಮಾಸ್ಟರ್ ಅಫಾನ್ ಕುಟ್ಟಿ ಹೇಳಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಾ ತಮ್ಮ ಬದಲಾದ ಜೀವನ ಕ್ರಮದ ನೈಜ ಚಿತ್ರಣವನ್ನು ತೆರೆದಿಟ್ಟರು. ಅವರೊಂದಿಗೆ ಅವರ ತಂದೆ ಬಿಜು ಕುಟ್ಟಿ ಮಗನ ಈ ಸಾಧನೆಯಿಂದ ಇವತ್ತು ಪ್ರಪಂಚ ನನ್ನನ್ನು ಗುರುತಿಸುವಂತೆ ಮಾಡಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬ್ರಾಹ್ಮೀ ಉಡುಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.